ಆಖ್ಯಾನ
	ಖ್ಯಾ (ಹೇಳು) ಎಂಬ ಧಾತುವಿನಿಂದ ಬಂದಿದೆ. ರಾಜಮಹಾರಾಜರ ಮತ್ತು ಇತರ ಸುಪ್ರಸಿದ್ಧ ವ್ಯಕ್ತಿಗಳ ಮಹತ್ಕಾರ್ಯಗಳನ್ನು ಒಂದೊಂದಾಗಿ ಹೇಳುವ ಕ್ರಮವಾಗಿದ್ದು ಹಾಗೆಯೇ ಸಂಸ್ಕøತ ಸಾಹಿತ್ಯದಲ್ಲಿ ಕ್ರಮೇಣ ರೂಪುಗೊಂಡಿರುವ ಒಂದು ಬಗೆ. ಛಂದೋಬದ್ಧವಾಗಿದೆ. ವೇದಗಳ ಕಾಲದಿಂದಲೂ ಬಳಕೆಯಲ್ಲಿದೆ. ನಾಲ್ಕು ವೇದಗಳು ಮತ್ತು ಐದನೆಯದು ಆಖ್ಯಾನವೆಂಬುದಾಗಿ ಮಹಾಭಾರತದಿಂದಾಗಿ ಗ್ರಂಥಗಳಲ್ಲಿರುವ ಉಲ್ಲೇಖದಿಂದ ಇದರ ಮಹತ್ವ ಸೂಚಿತವಾಗುತ್ತದೆ. ಅಲಂಕಾರ ಶಾಸ್ತ್ರದಲ್ಲಿ ಕಂಡುಬರುವ ಆಖ್ಯಾಯಿಕಾ ಮುಂತಾದ ಪ್ರಭೇದಗಳಿಗೆ ಆಧಾರವೆಂದು ಕೆಲವು ವಿದ್ವಾಂಸರ ಮತ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ